ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ

ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ

Thursday, 23 March 2017

"ಸುಹಾನ" ಸುಮಧುರ ಗಾನ




ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬಂತೆ ಹಾಡು ಹಕ್ಕಿಗೆ ಬೇಕು ಜಾತಿ ಧರ್ಮ ಎಂದು ಕೆಲವು ಮೂಲಭೂತವಾದಿಗಳು ವಿರೋಧಿಸುತ್ತಿರುವುದು ಕಂಡಾಗ ಅಸಹ್ಯ  ಅನಿಸುತ್ತದೆ 

ಅಷ್ಟಕ್ಕೂ ಆಗಿದ್ದಿಷ್ಟು ಝಿ ಕನ್ನಡ ವಾಹಿನಿಯ  ಸ ರೀ ಗ ಮ ಪ ವೇದಿಕೆಯಲ್ಲಿ ಸುಹಾನಾ ಎಂಬ ಹುಡುಗಿ ಸುಮಧುರವಾಗಿ ಭಕ್ತಿಗೀತೆ ಹಾಡಿದ್ದಕ್ಕೆ ಕೆಲವು 
ಮುಸ್ಲಿಂ  ಮೂಲಭೂತವಾದಿಗಳು ಇದನ್ನು ಧರ್ಮ ದ್ರೋಹ ಎನ್ನುತ್ತಿದ್ದಾರೆ

ಕೆಲವರ ಪ್ರಕಾರ ಇಸ್ಲಾಮ್ನಲ್ಲಿ ಸಂಗೀತ ನಿಷಿದ್ದವಂತೆ , ಇದು ಸತ್ಯವಾಗಿದ್ದರೆ ಮೊಹಮ್ಮದ್ ರಫಿ , ಬಿಸ್ಮಿಲ್ಲಾ ಖಾನ್ , ಮುಂತಾದವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿಲ್ಲವೇ  

ಮುಸ್ಲಿಂ ಹುಡುಗಿ ಹಿಂದೂ ಭಕ್ತಿಗೀತೆ ಹಾಡಿದ್ದಕ್ಕೆ ವಿರೋಧ ಪಡಿಸಿದರೆ ಅದಕ್ಕೆ ಅರ್ಥವಿಲ್ಲ ಕಲಾವಿದರಾಗಲಿ / ಸಂಗೀತಗಾರರಾಗಲಿ  ಯಾವುದೇ ಪಾತ್ರ ಅಥವಾ ಸಂಗೀತ ಹಾಡಿದಾಗ ಆ ಕ್ಷಣ ಮಾತ್ರ ಅವರು ಯಾವುದೇ ಧರ್ಮ, ಜಾತಿಯ ಬಗ್ಗೆ ಚಿಂತಿಸದೆ ಕೇವಲ ಸಂಗೀತಗಾರಾರಾಗಿ ತಮ್ಮ ಸಂಗೀತ ಧರ್ಮ ನಿಭಾಯಿಸುತ್ತಾರೆ 

ಇನ್ನು ಕೆಲವರು ಪುರುಷರ ಮುಂದೆ ಸೌಂದರ್ಯ ಪ್ರದರ್ಶಿಸುತ್ತಿದ್ದೀಯ ಎಂದು ಕೀಳಾಗಿ ಮಾತಾಡಿದ್ದಾರೆ ಸುಹಾನಾ ಪ್ರದರ್ಶಿಸುತ್ತಿರುವುದು ಸೌಂದರ್ಯವಲ್ಲ ತನ್ನ ಸಂಗೀತದ ಪಾಂಡಿತ್ಯ . ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡಬೇಡಿ .

ಯೇಸುದಾಸ್ ಅಯ್ಯಪ್ಪನ ಭಕ್ತಿಗೀತೆ ಹಾಡಿದಾಗಲೂ, ದೇವಸ್ಥಾನಕ್ಕೆ ಭೇಟಿ ಕೊಟ್ಟಾಗಲೂ  ಕೆಲವು ಮೂಲಭೂತವಾದಿಗಳು ತಕರಾರು ತೆಗೆದಿದ್ದರು ಆದರೆ  ಅವರ ಸುಶ್ರಾವ್ಯ ಕಂಠಕ್ಕೆ ಒಲಿಯದವರುಂಟೆ .? ಅವರ ಮಾಧುರ್ಯಕ್ಕೆ ಜಾತಿ ಧರ್ಮದ ಎಲ್ಲೆಯುಂಟೇ ...?

ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳ ಕಾಟ ಇದ್ದೆ ಇರುತ್ತದೆ , ಹಿಂದೂ ಧರ್ಮದ ಕೆಲ ಮುಖಂಡರು ಹೆಣ್ಣು ಮಕ್ಕಳು ಮನೆಯಲ್ಲಿಯೇ ಇರಬೇಕೆಂದು ಹೇಳುತ್ತಾರೆ , ಅವರದು ಸಂಕುಚಿತ ಮತ್ತು ದಬ್ಬಾಳಿಕೆಯ ಪ್ರವೃತ್ತಿ .

 ಯಾರು ಏನೇ ಹೇಳಿದರು ಸುಹಾನಾ  ಸದಾ  ಹಾಡುತ್ತಿರು ಎನ್ನುವುದೇ ಕರುನಾಡಿನ ಆಗ್ರಹ 

1 comment:

  1. Harrah's Cherokee Casino Resort - Mapyro
    Harrah's Cherokee Casino Resort is 제주 출장샵 a Native American casino located on หารายได้เสริม the Qualla 강릉 출장샵 Boundary 부산광역 출장샵 in Cherokee, North Carolina. It opened in 2004 and offers 2100 하남 출장샵 rooms

    ReplyDelete

"ಸುಹಾನ" ಸುಮಧುರ ಗಾನ

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬಂತೆ ಹಾಡು ಹಕ್ಕಿಗೆ ಬೇಕು ಜಾತಿ ಧರ್ಮ ಎಂದು ಕೆಲವು ಮೂಲಭೂತವಾದಿಗಳು ವಿರೋಧಿಸುತ್ತಿರುವುದು ಕಂಡಾಗ ಅಸಹ್ಯ  ಅನಿಸುತ್ತದೆ...