ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ

ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ

Friday, 15 May 2015

ಸಿದ್ದು ಸರ್ಕಾರಕ್ಕೆ ಎರಡು ವರ್ಷ:-





ಸಾಧನೆ-ಬರೀ ನಿದ್ದೆ:- 


ಯಾವುದೇ ಸರ್ಕಾರಕ್ಕು ಎರಡು ವರ್ಷ ಪೂರೈಸುವುದು ಸಂಭ್ರಮವೇ, ಅದು ಸಹಜ ಕೂಡ.

ಆ ಸಂಭ್ರಮಕ್ಕೆ ಒಂದು ಅರ್ಥ ಇರಬೇಕು, ಸಿದ್ದರಾಮಯ್ಯ ಎರಡು ವರ್ಷ  ಪೂರೈಸಿದ್ದು ಒಂದು ಸಾಧನೆ
ಅದೇನೆಂದರೆ ಮೂಲ ಕಾಂಗ್ರೆಸ್ಸಿಗರಿಂದ ತಪ್ಪಿಸಿಕೊಂಡು ಇಷ್ಟು ದಿನ ಉಳಿದಿದ್ದು...!

ಅನ್ನಭಾಗ್ಯ:  ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದು ಛತ್ತಿಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್, ಇದು ಬಡವರಿಗೆ ಭಾಗ್ಯವೇ ಆದರೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.
1.ಕಾಳಸಂತೆಯಲ್ಲಿ ಎಗ್ಗಿಲ್ಲದೇ ಮಾರಾಟ
2.ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರ  ಕೊರತೆ
3. ಬರೀ ಅನ್ನ ಕೊಟ್ಟರೆ ಸಾಂಬಾರ್ ಯಾರು ಕೊಡ್ತಾರೆ ಅಂತ ಇತ್ತೀಚಿಗೆ ಮಾನ್ಯ ಸಮಾಜ ಕಲ್ಯಾಣ ಮಂತ್ರಿಯವರನ್ನು ಅವರ ಕ್ಷೇತ್ರದಲ್ಲೇ ಮಹಿಳೆಯೊಬ್ಬರು ಪ್ರಶ್ನಿಸಿದ್ದಾರೆ.
4.ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸಬೇಕೆಂಬ ನಾಣ್ಣುಡಿಯಂತೆ ಜನರನ್ನು ಸ್ವಾವಲಂಬಿಯಾಗಿಸುವಲ್ಲಿ ವಿಫಲ.

ಸಿಗದ ಉದ್ಯೋಗ ಭಾಗ್ಯ:-
ಬರೀ ಅಕ್ಕಿ ಬೆಳೆ ಕೊಟ್ಟರೆ ಸಾಕೆ..... ಬಡವರ ಜೀವನ ಹಸಿರಾಗುವುದೇ.

ಇವತ್ತಿನ ದುಬಾರಿ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಉತ್ತಮ ಶಾಲೆಯಲ್ಲಿ, ಕಾಲೇಜಿನಲ್ಲಿ ಓದಿಸಬೆಕೆಂಬ ಆಸೆ ಇರುತ್ತದೆ. ವಿದ್ಯಾವಂತರಾದ ನಂತರ ಉದ್ಯೋಗಕ್ಕಾಗಿ ಅಲೆಯುವ ಕೆಲಸ

ಬರೀ ಅಕ್ಕಿ- ಬೆಳೆಯಿಂದ ಜೀವನದಲ್ಲಿ ಬದಲಾವಣೆ ಸಾಧ್ಯ ಇಲ್ಲ

ದಿನೇ ದಿನೇ ಪದವೀಧರರಾಗಿ ಲಕ್ಷಾಂತರ ಯುವಕರು ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಅದಕ್ಕೆ ತಕ್ಕನಾಗಿ
ಉದ್ಯೋಗ ಸೃಷ್ಟಿಯಾಗದಿದ್ದರೆ ಅವರ ಪಾಡೇನು..? ಎಂದಾದರು ಸರ್ಕಾರ ಇದರ ಬಗ್ಗೆ ಚಿಂತಿಸಿದಯೇ..?
ಸಕಾðರಿ ಹುದ್ದೆಗಳು  ಸಾವಿರಾರು ಖಾಲಿ ಇವೆ , ಪೋಲೀಸ್ ಇಲಾಖೆ, ಪಿಡಿಒ, ಎಸ್ ಡಿ ಎ, ಎಫ್ ಡಿ ಎ, ಆರ್ ಡಿ ಒ, ಸವೇðಯರ್ ....ಇನ್ನೂ ಸಾವಿರಾರು ಹುದ್ದೆಗಳನ್ನು ಭತಿð ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ  ಎಂದು ಸಿಗುವುದೊ..?
ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ  ಎಂಬ ಸುಳ್ಳಿನ ಕಂತೆ;-

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಗುವುದು ಎಂದು ಸರ್ಕಾರ  ತನ್ನ ಬಜೆಟ್ ನಲ್ಲಿ ಘೋಷಿಸಿದೆ ಆದರೆ ಇದುವರೆಗು ಎಷ್ಟು ಜನ ಸೌಲಭ್ಯ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ.

ಈ ವಿಚಾರದಲ್ಲಿ ನನ್ನ ಸ್ವಂತ ಅನುಭವ ಏನೆಂದರೆ ಈ ಸೌಲಭ್ಯ ಪಡೆಯಲು ನಾನು ಮತ್ತು ನನ್ನ ತಂದೆ  ಕೃಷಿ ಇಲಾಖೆಯನ್ನು  ಸಂಪಕಿðಸಿದಾಗ ಅವರಿಂದ ಬಂದ ಉತ್ತರ ನಿಮ್ಮ ತಾಲ್ಲೂಕು ರೈತ ಸಹಕಾರ ಸಂಘಗಳನ್ನು ಸಂಪರ್ಕಿಸಿ ಎಂದು, ಅದರಂತೆ ತಾಲ್ಲೂಕು ರೈತ ಸಹಕಾರ ಸಂಘಗಳಲ್ಲಿ ವಿಚಾರಿಸಿದಾಗ ಯಾವುದೇ ಮಾನದಂಡ ಒದಗಿಸಿಲ್ಲ ಎಂದು ಹೇಳಿದರು.
ಇದುವರೆಗೂ ನಮಗಾಗಲಿ, ನಮ್ಮ ಊರಿನವರಿಗಾಗಲಿ ಯಾರಿಗೂ ಈ ಸೌಲಭ್ಯ ಸಿಕ್ಕಿಲ್ಲ ,ಬೇರೆ ಯಾರಿಗೂ ಸಿಕ್ಕಿಲ್ಲ ಇದು ಬರೀ ಬಜೆಟ್ ಘೋಷಣೆ ಅಷ್ಟೇ ಅಂತ ಈಗ ಅರಿವಾಗಿದೆ.

ಅಹಿಂದ ಹೆಸರಲ್ಲಿ ಜಾತಿ ಮತ್ತು ಸ್ವಾಥð ರಾಜಕೀಯ:-
ಕೆಲವರು ಹಾಗೆ ಏನೆ ಮಾಡಿದರು ಬೇರೆ ಹೆಸರಲ್ಲಿ ಮಾಡ್ತಾರೆ ಆದರೆ ಲಾಭ (ಯಾರದೊ ಹೆಸರು ಯಾರದೊ ಬಸರು)ಮಾತ್ರ ಅವರಿಗೆ...ಈ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತೆ.
ಬಾಯಿಬಿಟ್ಟರೆ ಅಹಿಂದ ಅಹಿಂದ ಎಂದು ವಟಗುಟ್ಟುವ ಸಿದ್ದರಾಮಯ್ಯ ನಿಜವಾಗಿಯೂ ಆ ವಗðಕ್ಕೆ ಅನುಕೂಲ ಮಾಡಿದ್ದಾರೆಯೇ

ಡಾ||ಜಿ.ಪರಮೇಶ್ವರ್ ಅವರನ್ನು ಅವರ ಕ್ಷೇತ್ರದಲ್ಲೇ ಸೋಲಿಸಿದ್ದು  ಅಹಿಂದ ಕಲ್ಯಾಣವೇ..?

ಸಕಾðರದ ಆಯಕಟ್ಟಿನ ಸ್ಥಳಗಳಲ್ಲಿ ತನ್ನ ಜಾತಿಯವರನ್ನು ಕೂರಿಸಿದ್ದು,ಉದಾ: ಮಹಿಳಾ ಆಯೋಗದ ಅಧ್ಯಕ್ಷೆ-ಮಂಜುಳಾ ಮಾನಸ, ಕಾನೂನು ಸಲಹೆಗಾರ-ಕೆಂಪಯ್ಯ, ಮಂಡ್ಯ-ಮೈಸೂರು ಜಿಲ್ಲಾಧಿಕಾರಿಗಳ ವಗಾðವಣೆ ಮಾಡದೆ ಇರುವುದು, ಮೈಸೂರಿನ ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿದ್ದು, ಸಿದ್ದರಾಮಯ್ಯ ಬಲಗೈ ಬಂಟರು-ಭೈರತಿ ಸುರೇಶ್,ಭೈರತಿ ಬಸವರಾಜ್(ಯಾದವ ಸಮುದಾಯದ ಕೃಷ್ಣಪ್ಪ ಅವರಿಗೆ ಟಿಕೆಟ್ ಕೊಡದೆ ಇದ್ದ ಕಾರಣ ಕೃಷ್ಣಪ್ಪ ಅವರು ಬಂಡಾಯ ಎದ್ದು ಜೆ.ಡಿ.ಎಸ್ ಸೇರಿದ್ದು)...ಇನ್ನೂ ಅನೇಕ ಪ್ರಕರಣಗಳಿವೆ... ಈ ಸ್ಥಳಗಳಲ್ಲಿ ಕೂರಿಸಲು ಕ್ಷೌರಕ, ಮಡಿವಾಳ, ದಲಿತ,..ಮುಂತಾದ ಜಾತಿಗಳಲ್ಲಿರುವ ಯೋಗ್ಯ ವ್ಯಕ್ತಿಗಳು ಕಾಣಿಸಲಿಲ್ಲವೇ...?

ಯಾದವ , ನಾಯಕ , ಈಡಿಗ ಸಮುದಾಯವನ್ನು ತುಳಿದಿದ್ದು /ತುಳಿಯುತ್ತಿರುವುದು ಯಾರು...?
ದಲಿತರಿಗೆ ಏಕೆ ಉಪಮುಖ್ಯಮಂತ್ರಿ ಸ್ಥಾನ ಕೊಡುತ್ತಿಲ್ಲ...?

ತಾವು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಅಹಿಂದ ಸಮಾವೇಶ(ಕುರುಬ ಸಮಾವೇಶ) ನಡೆಸುವುದ್ಯಾಕೆ..?

ಒಟ್ಟಿನಲ್ಲಿ ಅಹಿಂದ ಅಹಿಂದ ಅಂತ ತನ್ನ ಮತ್ತು ತನ್ನವರ ಹೊಟ್ಟೆ ತುಂಬಿಸುತ್ತಿರುವುದು ಕಟು ಸತ್ಯ.

ದೇವೇಗೌಡರ ಮೇಲಿನ ದ್ವೇಷವನ್ನು ರೈತ ಸಮುದಾಯದ (ಒಕ್ಕಲಿಗ) ವಿರುದ್ಧ ತೀರಿಸಿಕೊಳ್ಳುತ್ತಿರುವುದು:-

ಕೆಂಪೇಗೌಡ ಸಂಶೋಧನಾ ಸಂಸ್ಥಗೆ ಹಣ ಕೊಡಲಿಲ್ಲ..

ಬಿ.ಜಿ.ಎಸ್ ಸ್ಮಾರಕ ನಿರ್ಮಿಸಲಿಲ್ಲ..

ಕೆಂಪೇಗೌಡ  ಸ್ಮಾರಕ ನಿರ್ಮಿಸಲಿಲ್ಲ.

ಬಡ ಲಿಂಗಾಯಿತ/ಬಡ/ಮಧ್ಯಮ ಒಕ್ಕಲಿಗರ ಬೇಡಿಕ ಈಡೇರಿಸಲಿಲ್ಲ(ಒಕ್ಕಲಿಗರ ಕುಲಕಸುಬು ಪ್ರೋತ್ಸಾಹಿಸಲು ಒಕ್ಕಲಿಗ ಅಭಿವೃದ್ಧಿ ನಿಗಮ ತೆರೆಯಲಿಲ್ಲ)

ಬಡ ಒಕ್ಕಲಿಗರ ಮಕ್ಕಳಿಗೆ ವಿದ್ಯಾಥಿð ವೇತನ ಸಿಗುತ್ತಿಲ್ಲ.

ಬಡ ಒಕ್ಕಲಿಗರ ಮಕ್ಕಳಿಗೆ  ಉನ್ನತ  ಶಿಕ್ಷಣ ಬಲು ದುಬಾರಿಯಾಗಿದೆ.

ಆಯಕಟ್ಟಿನ ಸ್ಥಳಗಳಿಂದ ದೂರ ಇಡುತ್ತಿರುವುದು.

ಒಕ್ಕಲಿಗ  ಅಧಿಕಾರಗಳಿಗೆ ಕಿರುಕುಳ, ದೂರದ  ಊರುಗಳಿಗೆ ಬೇಕಾಬಿಟ್ಟಿ ವಗಾðವಣೆ

ಯಡಿಯೂರಪ್ಪ ಮೇಲಿನ ದ್ವೇಷವನ್ನು ಲಿಂಗಾಯಿತರ ವಿರುದ್ಧ ತೀರಿಸಿಕೊಳ್ಳುತ್ತಿರುವುದು:-
ಸುಮಾರು 80 ವಷðಗಳ ನಂತರ ಕೈಗೊಳ್ಳಲಾಗಿರುವ ಈ ಜಾತಿ ಗಣತಿಯು ಕೆಲವರಿಗೆ ಸಂತೋಷ, ಕೆಲವರಿಗೆ ಕಹಿ...!

ಇನ್ನೂ ಕೆಲವರಿಗೆ ಸಿದ್ದರಾಮಯ್ಯ ಗೋಲ್ ಮಾಲ್ ಮಾಡಿ ತಮ್ಮ ಜಾತಿ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು ಎಂಬ ಗುಮಾನಿ.

ಈ ಮಧ್ಯೆ ಲಿಂಗಾಯಿತ ಉಪಪಂಗಡಗಳನ್ನು ಎತ್ತಿ ಕಟ್ಟಿ, ಹೊಡೆದು ಆಳುವ ಹುನ್ನಾರ ನಡೆಯುತ್ತಿರುವುದು ದುರಂತ, ಈ ವಿಚಾರದಲ್ಲಿ ಅತಿ ಹೆಚ್ಚು ಹೊಡೆತ ಬೀಳುವುದು ಲಿಂಗಾಯಿತರಿಗಂತೆ.

ಲಿಂಗಾಯಿತ ಅನ್ನುವುದು ಧಮð ಮಾಡಲು ಅಥವಾ ವೀರಶೈವ ಧಮð ಮಾಡುವ ಪ್ರಯತ್ನ ನಡೆದಿದೆ. ಆದರೆ ವಾಸ್ತವದಲ್ಲಿ 12 ನೇ ಶತಮಾನದಲ್ಲಿ ನಡೆದ ಕ್ರಾಂತಿಯಿಂದ ಎಲ್ಲಾ ಜಾತಿಗಳು ಲಿಂಗಾಯಿತ ಪಂಥದಲ್ಲಿ ಒಂದಾದವು. ಆದುದರಿಂದ ಲಿಂಗಾಯಿತರಲ್ಲಿ ಲಿಂಗಾಯಿತ ಪಂಚಮಸಾಲಿ, ಲಿಂಗಾಯಿತ ಸಾದರ, ಲಿಂಗಾಯಿತ ಕಮ್ಮಾರ,ಲಿಂಗಾಯಿತ ಸಿಂಪಿಗ,ಲಿಂಗಾಯಿತ ಬಣಜಿಗ, ಲಿಂಗಾಯಿತ ಕುಂಚಿಟಿಗ, ಲಿಂಗಾಯಿತ ರೆಡ್ಡಿ, ಲಿಂಗಾಯಿತ ಹಡಪದ, ಲಿಂಗಾಯಿತ ಕುಡುಒಕ್ಕಲಿಗ, ಲಿಂಗಾಯಿತ ಚಮ್ಮಾರ, ಲಿಂಗಾಯಿತ ಕುರುಬ, ಲಿಂಗಾಯಿತ ಗಾಣಿಗ, ಲಿಂಗಾಯಿತ ಹೆಳವ, ಲಿಂಗಾಯಿತ ನೊಣಬ ಹೀಗೆ ನೂರಾರು ಜಾತಿಗಳ ಒಕ್ಕೂಟ. ಈಗ ಕೆಲವರು ಬರೀ ಗಾಣಿಗ(ಯಡಿಯುರಪ್ಪ-ಲಿಂಗಾಯಿತ ಗಾಣಿಗ), ಬರೀ ಕುಂಚಿಟಿಗ(ಹೊಸದುಗð ಶಾಂತವೀರ ಸ್ವಾಮಿ-ಲಿಂಗಾಯಿತ ಕುಂಚಿಟಿಗ), ಬರೀ ಸಾದರ(ಮುಖ್ಯಮಂತ್ರಿ ಚಂದ್ರು-ಲಿಂಗಾಯಿತ ಸಾದರ), ಬರೀ ಬಣಜಿಗ, ಹಿಂದು ಬೇಡಜಂಗಮ ಎಂದು, ಬರೀ ಕುಡು ಒಕ್ಕಲಿಗ ಎಂದು ಬರೆಸಲು ಆಯಾ ಮಠಗಳು,ಸಂಘ-ಸಂಸ್ಥೆಗಳು ಕರೆ ಕೊಟ್ಟಿವೆ.. ಇದು ಒಂದಾಗುವ ಮತ್ತು ವಿಘಟನೆಗೊಳ್ಳುವ ಕಾಲ. ಎಚ್ಚೆತ್ತುಕೊಳ್ಳುವುದು ಅವರವರಿಗೆ ಬಿಟ್ಟಿದ್ದು.

ಬಡ ಲಿಂಗಾಯಿತರ ಬೇಡಿಕ ಈಡೇರಿಸಲಿಲ್ಲ(ಕುಲಕಸುಬು ಪ್ರೋತ್ಸಾಹಿಸಲು ಅಭಿವೃದ್ಧಿ ನಿಗಮ ತೆರೆಯಲಿಲ್ಲ)

ಆಯಕಟ್ಟಿನ ಸ್ಥಳಗಳಿಂದ ದೂರ ಇಡುತ್ತಿರುವುದು.

ರಾಜಕೀಯವಾಗಿ ದುಬðಲಗೊಳಿಸಲು ಯತ್ನಿಸುತ್ತಿರುವುದು.

ಲಿಂಗಾಯಿತ ಅಧಿಕಾರಗಳಿಗೆ ಕಿರುಕುಳ(ಶಂಕರ್ ಬಿದರಿ ಪ್ರಕರಣ  ಇನ್ನೂ ಜನ ಮರೆತಿಲ್ಲ)









No comments:

Post a Comment

"ಸುಹಾನ" ಸುಮಧುರ ಗಾನ

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬಂತೆ ಹಾಡು ಹಕ್ಕಿಗೆ ಬೇಕು ಜಾತಿ ಧರ್ಮ ಎಂದು ಕೆಲವು ಮೂಲಭೂತವಾದಿಗಳು ವಿರೋಧಿಸುತ್ತಿರುವುದು ಕಂಡಾಗ ಅಸಹ್ಯ  ಅನಿಸುತ್ತದೆ...