ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬಂತೆ ಹಾಡು ಹಕ್ಕಿಗೆ ಬೇಕು ಜಾತಿ ಧರ್ಮ ಎಂದು ಕೆಲವು ಮೂಲಭೂತವಾದಿಗಳು ವಿರೋಧಿಸುತ್ತಿರುವುದು ಕಂಡಾಗ ಅಸಹ್ಯ ಅನಿಸುತ್ತದೆ
ಅಷ್ಟಕ್ಕೂ ಆಗಿದ್ದಿಷ್ಟು ಝಿ ಕನ್ನಡ ವಾಹಿನಿಯ ಸ ರೀ ಗ ಮ ಪ ವೇದಿಕೆಯಲ್ಲಿ ಸುಹಾನಾ ಎಂಬ ಹುಡುಗಿ ಸುಮಧುರವಾಗಿ ಭಕ್ತಿಗೀತೆ ಹಾಡಿದ್ದಕ್ಕೆ ಕೆಲವು
ಮುಸ್ಲಿಂ ಮೂಲಭೂತವಾದಿಗಳು ಇದನ್ನು ಧರ್ಮ ದ್ರೋಹ ಎನ್ನುತ್ತಿದ್ದಾರೆ
ಕೆಲವರ ಪ್ರಕಾರ ಇಸ್ಲಾಮ್ನಲ್ಲಿ ಸಂಗೀತ ನಿಷಿದ್ದವಂತೆ , ಇದು ಸತ್ಯವಾಗಿದ್ದರೆ ಮೊಹಮ್ಮದ್ ರಫಿ , ಬಿಸ್ಮಿಲ್ಲಾ ಖಾನ್ , ಮುಂತಾದವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿಲ್ಲವೇ
ಮುಸ್ಲಿಂ ಹುಡುಗಿ ಹಿಂದೂ ಭಕ್ತಿಗೀತೆ ಹಾಡಿದ್ದಕ್ಕೆ ವಿರೋಧ ಪಡಿಸಿದರೆ ಅದಕ್ಕೆ ಅರ್ಥವಿಲ್ಲ ಕಲಾವಿದರಾಗಲಿ / ಸಂಗೀತಗಾರರಾಗಲಿ ಯಾವುದೇ ಪಾತ್ರ ಅಥವಾ ಸಂಗೀತ ಹಾಡಿದಾಗ ಆ ಕ್ಷಣ ಮಾತ್ರ ಅವರು ಯಾವುದೇ ಧರ್ಮ, ಜಾತಿಯ ಬಗ್ಗೆ ಚಿಂತಿಸದೆ ಕೇವಲ ಸಂಗೀತಗಾರಾರಾಗಿ ತಮ್ಮ ಸಂಗೀತ ಧರ್ಮ ನಿಭಾಯಿಸುತ್ತಾರೆ
ಇನ್ನು ಕೆಲವರು ಪುರುಷರ ಮುಂದೆ ಸೌಂದರ್ಯ ಪ್ರದರ್ಶಿಸುತ್ತಿದ್ದೀಯ ಎಂದು ಕೀಳಾಗಿ ಮಾತಾಡಿದ್ದಾರೆ ಸುಹಾನಾ ಪ್ರದರ್ಶಿಸುತ್ತಿರುವುದು ಸೌಂದರ್ಯವಲ್ಲ ತನ್ನ ಸಂಗೀತದ ಪಾಂಡಿತ್ಯ . ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡಬೇಡಿ .
ಯೇಸುದಾಸ್ ಅಯ್ಯಪ್ಪನ ಭಕ್ತಿಗೀತೆ ಹಾಡಿದಾಗಲೂ, ದೇವಸ್ಥಾನಕ್ಕೆ ಭೇಟಿ ಕೊಟ್ಟಾಗಲೂ ಕೆಲವು ಮೂಲಭೂತವಾದಿಗಳು ತಕರಾರು ತೆಗೆದಿದ್ದರು ಆದರೆ ಅವರ ಸುಶ್ರಾವ್ಯ ಕಂಠಕ್ಕೆ ಒಲಿಯದವರುಂಟೆ .? ಅವರ ಮಾಧುರ್ಯಕ್ಕೆ ಜಾತಿ ಧರ್ಮದ ಎಲ್ಲೆಯುಂಟೇ ...?
ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳ ಕಾಟ ಇದ್ದೆ ಇರುತ್ತದೆ , ಹಿಂದೂ ಧರ್ಮದ ಕೆಲ ಮುಖಂಡರು ಹೆಣ್ಣು ಮಕ್ಕಳು ಮನೆಯಲ್ಲಿಯೇ ಇರಬೇಕೆಂದು ಹೇಳುತ್ತಾರೆ , ಅವರದು ಸಂಕುಚಿತ ಮತ್ತು ದಬ್ಬಾಳಿಕೆಯ ಪ್ರವೃತ್ತಿ .
ಯಾರು ಏನೇ ಹೇಳಿದರು ಸುಹಾನಾ ಸದಾ ಹಾಡುತ್ತಿರು ಎನ್ನುವುದೇ ಕರುನಾಡಿನ ಆಗ್ರಹ