ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ

ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ

Thursday, 23 March 2017

"ಸುಹಾನ" ಸುಮಧುರ ಗಾನ




ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬಂತೆ ಹಾಡು ಹಕ್ಕಿಗೆ ಬೇಕು ಜಾತಿ ಧರ್ಮ ಎಂದು ಕೆಲವು ಮೂಲಭೂತವಾದಿಗಳು ವಿರೋಧಿಸುತ್ತಿರುವುದು ಕಂಡಾಗ ಅಸಹ್ಯ  ಅನಿಸುತ್ತದೆ 

ಅಷ್ಟಕ್ಕೂ ಆಗಿದ್ದಿಷ್ಟು ಝಿ ಕನ್ನಡ ವಾಹಿನಿಯ  ಸ ರೀ ಗ ಮ ಪ ವೇದಿಕೆಯಲ್ಲಿ ಸುಹಾನಾ ಎಂಬ ಹುಡುಗಿ ಸುಮಧುರವಾಗಿ ಭಕ್ತಿಗೀತೆ ಹಾಡಿದ್ದಕ್ಕೆ ಕೆಲವು 
ಮುಸ್ಲಿಂ  ಮೂಲಭೂತವಾದಿಗಳು ಇದನ್ನು ಧರ್ಮ ದ್ರೋಹ ಎನ್ನುತ್ತಿದ್ದಾರೆ

ಕೆಲವರ ಪ್ರಕಾರ ಇಸ್ಲಾಮ್ನಲ್ಲಿ ಸಂಗೀತ ನಿಷಿದ್ದವಂತೆ , ಇದು ಸತ್ಯವಾಗಿದ್ದರೆ ಮೊಹಮ್ಮದ್ ರಫಿ , ಬಿಸ್ಮಿಲ್ಲಾ ಖಾನ್ , ಮುಂತಾದವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿಲ್ಲವೇ  

ಮುಸ್ಲಿಂ ಹುಡುಗಿ ಹಿಂದೂ ಭಕ್ತಿಗೀತೆ ಹಾಡಿದ್ದಕ್ಕೆ ವಿರೋಧ ಪಡಿಸಿದರೆ ಅದಕ್ಕೆ ಅರ್ಥವಿಲ್ಲ ಕಲಾವಿದರಾಗಲಿ / ಸಂಗೀತಗಾರರಾಗಲಿ  ಯಾವುದೇ ಪಾತ್ರ ಅಥವಾ ಸಂಗೀತ ಹಾಡಿದಾಗ ಆ ಕ್ಷಣ ಮಾತ್ರ ಅವರು ಯಾವುದೇ ಧರ್ಮ, ಜಾತಿಯ ಬಗ್ಗೆ ಚಿಂತಿಸದೆ ಕೇವಲ ಸಂಗೀತಗಾರಾರಾಗಿ ತಮ್ಮ ಸಂಗೀತ ಧರ್ಮ ನಿಭಾಯಿಸುತ್ತಾರೆ 

ಇನ್ನು ಕೆಲವರು ಪುರುಷರ ಮುಂದೆ ಸೌಂದರ್ಯ ಪ್ರದರ್ಶಿಸುತ್ತಿದ್ದೀಯ ಎಂದು ಕೀಳಾಗಿ ಮಾತಾಡಿದ್ದಾರೆ ಸುಹಾನಾ ಪ್ರದರ್ಶಿಸುತ್ತಿರುವುದು ಸೌಂದರ್ಯವಲ್ಲ ತನ್ನ ಸಂಗೀತದ ಪಾಂಡಿತ್ಯ . ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡಬೇಡಿ .

ಯೇಸುದಾಸ್ ಅಯ್ಯಪ್ಪನ ಭಕ್ತಿಗೀತೆ ಹಾಡಿದಾಗಲೂ, ದೇವಸ್ಥಾನಕ್ಕೆ ಭೇಟಿ ಕೊಟ್ಟಾಗಲೂ  ಕೆಲವು ಮೂಲಭೂತವಾದಿಗಳು ತಕರಾರು ತೆಗೆದಿದ್ದರು ಆದರೆ  ಅವರ ಸುಶ್ರಾವ್ಯ ಕಂಠಕ್ಕೆ ಒಲಿಯದವರುಂಟೆ .? ಅವರ ಮಾಧುರ್ಯಕ್ಕೆ ಜಾತಿ ಧರ್ಮದ ಎಲ್ಲೆಯುಂಟೇ ...?

ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳ ಕಾಟ ಇದ್ದೆ ಇರುತ್ತದೆ , ಹಿಂದೂ ಧರ್ಮದ ಕೆಲ ಮುಖಂಡರು ಹೆಣ್ಣು ಮಕ್ಕಳು ಮನೆಯಲ್ಲಿಯೇ ಇರಬೇಕೆಂದು ಹೇಳುತ್ತಾರೆ , ಅವರದು ಸಂಕುಚಿತ ಮತ್ತು ದಬ್ಬಾಳಿಕೆಯ ಪ್ರವೃತ್ತಿ .

 ಯಾರು ಏನೇ ಹೇಳಿದರು ಸುಹಾನಾ  ಸದಾ  ಹಾಡುತ್ತಿರು ಎನ್ನುವುದೇ ಕರುನಾಡಿನ ಆಗ್ರಹ 

Friday, 15 May 2015

ಸಿದ್ದು ಸರ್ಕಾರಕ್ಕೆ ಎರಡು ವರ್ಷ:-





ಸಾಧನೆ-ಬರೀ ನಿದ್ದೆ:- 


ಯಾವುದೇ ಸರ್ಕಾರಕ್ಕು ಎರಡು ವರ್ಷ ಪೂರೈಸುವುದು ಸಂಭ್ರಮವೇ, ಅದು ಸಹಜ ಕೂಡ.

ಆ ಸಂಭ್ರಮಕ್ಕೆ ಒಂದು ಅರ್ಥ ಇರಬೇಕು, ಸಿದ್ದರಾಮಯ್ಯ ಎರಡು ವರ್ಷ  ಪೂರೈಸಿದ್ದು ಒಂದು ಸಾಧನೆ
ಅದೇನೆಂದರೆ ಮೂಲ ಕಾಂಗ್ರೆಸ್ಸಿಗರಿಂದ ತಪ್ಪಿಸಿಕೊಂಡು ಇಷ್ಟು ದಿನ ಉಳಿದಿದ್ದು...!

ಅನ್ನಭಾಗ್ಯ:  ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದು ಛತ್ತಿಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್, ಇದು ಬಡವರಿಗೆ ಭಾಗ್ಯವೇ ಆದರೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.
1.ಕಾಳಸಂತೆಯಲ್ಲಿ ಎಗ್ಗಿಲ್ಲದೇ ಮಾರಾಟ
2.ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರ  ಕೊರತೆ
3. ಬರೀ ಅನ್ನ ಕೊಟ್ಟರೆ ಸಾಂಬಾರ್ ಯಾರು ಕೊಡ್ತಾರೆ ಅಂತ ಇತ್ತೀಚಿಗೆ ಮಾನ್ಯ ಸಮಾಜ ಕಲ್ಯಾಣ ಮಂತ್ರಿಯವರನ್ನು ಅವರ ಕ್ಷೇತ್ರದಲ್ಲೇ ಮಹಿಳೆಯೊಬ್ಬರು ಪ್ರಶ್ನಿಸಿದ್ದಾರೆ.
4.ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸಬೇಕೆಂಬ ನಾಣ್ಣುಡಿಯಂತೆ ಜನರನ್ನು ಸ್ವಾವಲಂಬಿಯಾಗಿಸುವಲ್ಲಿ ವಿಫಲ.

ಸಿಗದ ಉದ್ಯೋಗ ಭಾಗ್ಯ:-
ಬರೀ ಅಕ್ಕಿ ಬೆಳೆ ಕೊಟ್ಟರೆ ಸಾಕೆ..... ಬಡವರ ಜೀವನ ಹಸಿರಾಗುವುದೇ.

ಇವತ್ತಿನ ದುಬಾರಿ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಉತ್ತಮ ಶಾಲೆಯಲ್ಲಿ, ಕಾಲೇಜಿನಲ್ಲಿ ಓದಿಸಬೆಕೆಂಬ ಆಸೆ ಇರುತ್ತದೆ. ವಿದ್ಯಾವಂತರಾದ ನಂತರ ಉದ್ಯೋಗಕ್ಕಾಗಿ ಅಲೆಯುವ ಕೆಲಸ

ಬರೀ ಅಕ್ಕಿ- ಬೆಳೆಯಿಂದ ಜೀವನದಲ್ಲಿ ಬದಲಾವಣೆ ಸಾಧ್ಯ ಇಲ್ಲ

ದಿನೇ ದಿನೇ ಪದವೀಧರರಾಗಿ ಲಕ್ಷಾಂತರ ಯುವಕರು ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಅದಕ್ಕೆ ತಕ್ಕನಾಗಿ
ಉದ್ಯೋಗ ಸೃಷ್ಟಿಯಾಗದಿದ್ದರೆ ಅವರ ಪಾಡೇನು..? ಎಂದಾದರು ಸರ್ಕಾರ ಇದರ ಬಗ್ಗೆ ಚಿಂತಿಸಿದಯೇ..?
ಸಕಾðರಿ ಹುದ್ದೆಗಳು  ಸಾವಿರಾರು ಖಾಲಿ ಇವೆ , ಪೋಲೀಸ್ ಇಲಾಖೆ, ಪಿಡಿಒ, ಎಸ್ ಡಿ ಎ, ಎಫ್ ಡಿ ಎ, ಆರ್ ಡಿ ಒ, ಸವೇðಯರ್ ....ಇನ್ನೂ ಸಾವಿರಾರು ಹುದ್ದೆಗಳನ್ನು ಭತಿð ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ  ಎಂದು ಸಿಗುವುದೊ..?
ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ  ಎಂಬ ಸುಳ್ಳಿನ ಕಂತೆ;-

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಗುವುದು ಎಂದು ಸರ್ಕಾರ  ತನ್ನ ಬಜೆಟ್ ನಲ್ಲಿ ಘೋಷಿಸಿದೆ ಆದರೆ ಇದುವರೆಗು ಎಷ್ಟು ಜನ ಸೌಲಭ್ಯ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ.

ಈ ವಿಚಾರದಲ್ಲಿ ನನ್ನ ಸ್ವಂತ ಅನುಭವ ಏನೆಂದರೆ ಈ ಸೌಲಭ್ಯ ಪಡೆಯಲು ನಾನು ಮತ್ತು ನನ್ನ ತಂದೆ  ಕೃಷಿ ಇಲಾಖೆಯನ್ನು  ಸಂಪಕಿðಸಿದಾಗ ಅವರಿಂದ ಬಂದ ಉತ್ತರ ನಿಮ್ಮ ತಾಲ್ಲೂಕು ರೈತ ಸಹಕಾರ ಸಂಘಗಳನ್ನು ಸಂಪರ್ಕಿಸಿ ಎಂದು, ಅದರಂತೆ ತಾಲ್ಲೂಕು ರೈತ ಸಹಕಾರ ಸಂಘಗಳಲ್ಲಿ ವಿಚಾರಿಸಿದಾಗ ಯಾವುದೇ ಮಾನದಂಡ ಒದಗಿಸಿಲ್ಲ ಎಂದು ಹೇಳಿದರು.
ಇದುವರೆಗೂ ನಮಗಾಗಲಿ, ನಮ್ಮ ಊರಿನವರಿಗಾಗಲಿ ಯಾರಿಗೂ ಈ ಸೌಲಭ್ಯ ಸಿಕ್ಕಿಲ್ಲ ,ಬೇರೆ ಯಾರಿಗೂ ಸಿಕ್ಕಿಲ್ಲ ಇದು ಬರೀ ಬಜೆಟ್ ಘೋಷಣೆ ಅಷ್ಟೇ ಅಂತ ಈಗ ಅರಿವಾಗಿದೆ.

ಅಹಿಂದ ಹೆಸರಲ್ಲಿ ಜಾತಿ ಮತ್ತು ಸ್ವಾಥð ರಾಜಕೀಯ:-
ಕೆಲವರು ಹಾಗೆ ಏನೆ ಮಾಡಿದರು ಬೇರೆ ಹೆಸರಲ್ಲಿ ಮಾಡ್ತಾರೆ ಆದರೆ ಲಾಭ (ಯಾರದೊ ಹೆಸರು ಯಾರದೊ ಬಸರು)ಮಾತ್ರ ಅವರಿಗೆ...ಈ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತೆ.
ಬಾಯಿಬಿಟ್ಟರೆ ಅಹಿಂದ ಅಹಿಂದ ಎಂದು ವಟಗುಟ್ಟುವ ಸಿದ್ದರಾಮಯ್ಯ ನಿಜವಾಗಿಯೂ ಆ ವಗðಕ್ಕೆ ಅನುಕೂಲ ಮಾಡಿದ್ದಾರೆಯೇ

ಡಾ||ಜಿ.ಪರಮೇಶ್ವರ್ ಅವರನ್ನು ಅವರ ಕ್ಷೇತ್ರದಲ್ಲೇ ಸೋಲಿಸಿದ್ದು  ಅಹಿಂದ ಕಲ್ಯಾಣವೇ..?

ಸಕಾðರದ ಆಯಕಟ್ಟಿನ ಸ್ಥಳಗಳಲ್ಲಿ ತನ್ನ ಜಾತಿಯವರನ್ನು ಕೂರಿಸಿದ್ದು,ಉದಾ: ಮಹಿಳಾ ಆಯೋಗದ ಅಧ್ಯಕ್ಷೆ-ಮಂಜುಳಾ ಮಾನಸ, ಕಾನೂನು ಸಲಹೆಗಾರ-ಕೆಂಪಯ್ಯ, ಮಂಡ್ಯ-ಮೈಸೂರು ಜಿಲ್ಲಾಧಿಕಾರಿಗಳ ವಗಾðವಣೆ ಮಾಡದೆ ಇರುವುದು, ಮೈಸೂರಿನ ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿದ್ದು, ಸಿದ್ದರಾಮಯ್ಯ ಬಲಗೈ ಬಂಟರು-ಭೈರತಿ ಸುರೇಶ್,ಭೈರತಿ ಬಸವರಾಜ್(ಯಾದವ ಸಮುದಾಯದ ಕೃಷ್ಣಪ್ಪ ಅವರಿಗೆ ಟಿಕೆಟ್ ಕೊಡದೆ ಇದ್ದ ಕಾರಣ ಕೃಷ್ಣಪ್ಪ ಅವರು ಬಂಡಾಯ ಎದ್ದು ಜೆ.ಡಿ.ಎಸ್ ಸೇರಿದ್ದು)...ಇನ್ನೂ ಅನೇಕ ಪ್ರಕರಣಗಳಿವೆ... ಈ ಸ್ಥಳಗಳಲ್ಲಿ ಕೂರಿಸಲು ಕ್ಷೌರಕ, ಮಡಿವಾಳ, ದಲಿತ,..ಮುಂತಾದ ಜಾತಿಗಳಲ್ಲಿರುವ ಯೋಗ್ಯ ವ್ಯಕ್ತಿಗಳು ಕಾಣಿಸಲಿಲ್ಲವೇ...?

ಯಾದವ , ನಾಯಕ , ಈಡಿಗ ಸಮುದಾಯವನ್ನು ತುಳಿದಿದ್ದು /ತುಳಿಯುತ್ತಿರುವುದು ಯಾರು...?
ದಲಿತರಿಗೆ ಏಕೆ ಉಪಮುಖ್ಯಮಂತ್ರಿ ಸ್ಥಾನ ಕೊಡುತ್ತಿಲ್ಲ...?

ತಾವು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಅಹಿಂದ ಸಮಾವೇಶ(ಕುರುಬ ಸಮಾವೇಶ) ನಡೆಸುವುದ್ಯಾಕೆ..?

ಒಟ್ಟಿನಲ್ಲಿ ಅಹಿಂದ ಅಹಿಂದ ಅಂತ ತನ್ನ ಮತ್ತು ತನ್ನವರ ಹೊಟ್ಟೆ ತುಂಬಿಸುತ್ತಿರುವುದು ಕಟು ಸತ್ಯ.

ದೇವೇಗೌಡರ ಮೇಲಿನ ದ್ವೇಷವನ್ನು ರೈತ ಸಮುದಾಯದ (ಒಕ್ಕಲಿಗ) ವಿರುದ್ಧ ತೀರಿಸಿಕೊಳ್ಳುತ್ತಿರುವುದು:-

ಕೆಂಪೇಗೌಡ ಸಂಶೋಧನಾ ಸಂಸ್ಥಗೆ ಹಣ ಕೊಡಲಿಲ್ಲ..

ಬಿ.ಜಿ.ಎಸ್ ಸ್ಮಾರಕ ನಿರ್ಮಿಸಲಿಲ್ಲ..

ಕೆಂಪೇಗೌಡ  ಸ್ಮಾರಕ ನಿರ್ಮಿಸಲಿಲ್ಲ.

ಬಡ ಲಿಂಗಾಯಿತ/ಬಡ/ಮಧ್ಯಮ ಒಕ್ಕಲಿಗರ ಬೇಡಿಕ ಈಡೇರಿಸಲಿಲ್ಲ(ಒಕ್ಕಲಿಗರ ಕುಲಕಸುಬು ಪ್ರೋತ್ಸಾಹಿಸಲು ಒಕ್ಕಲಿಗ ಅಭಿವೃದ್ಧಿ ನಿಗಮ ತೆರೆಯಲಿಲ್ಲ)

ಬಡ ಒಕ್ಕಲಿಗರ ಮಕ್ಕಳಿಗೆ ವಿದ್ಯಾಥಿð ವೇತನ ಸಿಗುತ್ತಿಲ್ಲ.

ಬಡ ಒಕ್ಕಲಿಗರ ಮಕ್ಕಳಿಗೆ  ಉನ್ನತ  ಶಿಕ್ಷಣ ಬಲು ದುಬಾರಿಯಾಗಿದೆ.

ಆಯಕಟ್ಟಿನ ಸ್ಥಳಗಳಿಂದ ದೂರ ಇಡುತ್ತಿರುವುದು.

ಒಕ್ಕಲಿಗ  ಅಧಿಕಾರಗಳಿಗೆ ಕಿರುಕುಳ, ದೂರದ  ಊರುಗಳಿಗೆ ಬೇಕಾಬಿಟ್ಟಿ ವಗಾðವಣೆ

ಯಡಿಯೂರಪ್ಪ ಮೇಲಿನ ದ್ವೇಷವನ್ನು ಲಿಂಗಾಯಿತರ ವಿರುದ್ಧ ತೀರಿಸಿಕೊಳ್ಳುತ್ತಿರುವುದು:-
ಸುಮಾರು 80 ವಷðಗಳ ನಂತರ ಕೈಗೊಳ್ಳಲಾಗಿರುವ ಈ ಜಾತಿ ಗಣತಿಯು ಕೆಲವರಿಗೆ ಸಂತೋಷ, ಕೆಲವರಿಗೆ ಕಹಿ...!

ಇನ್ನೂ ಕೆಲವರಿಗೆ ಸಿದ್ದರಾಮಯ್ಯ ಗೋಲ್ ಮಾಲ್ ಮಾಡಿ ತಮ್ಮ ಜಾತಿ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು ಎಂಬ ಗುಮಾನಿ.

ಈ ಮಧ್ಯೆ ಲಿಂಗಾಯಿತ ಉಪಪಂಗಡಗಳನ್ನು ಎತ್ತಿ ಕಟ್ಟಿ, ಹೊಡೆದು ಆಳುವ ಹುನ್ನಾರ ನಡೆಯುತ್ತಿರುವುದು ದುರಂತ, ಈ ವಿಚಾರದಲ್ಲಿ ಅತಿ ಹೆಚ್ಚು ಹೊಡೆತ ಬೀಳುವುದು ಲಿಂಗಾಯಿತರಿಗಂತೆ.

ಲಿಂಗಾಯಿತ ಅನ್ನುವುದು ಧಮð ಮಾಡಲು ಅಥವಾ ವೀರಶೈವ ಧಮð ಮಾಡುವ ಪ್ರಯತ್ನ ನಡೆದಿದೆ. ಆದರೆ ವಾಸ್ತವದಲ್ಲಿ 12 ನೇ ಶತಮಾನದಲ್ಲಿ ನಡೆದ ಕ್ರಾಂತಿಯಿಂದ ಎಲ್ಲಾ ಜಾತಿಗಳು ಲಿಂಗಾಯಿತ ಪಂಥದಲ್ಲಿ ಒಂದಾದವು. ಆದುದರಿಂದ ಲಿಂಗಾಯಿತರಲ್ಲಿ ಲಿಂಗಾಯಿತ ಪಂಚಮಸಾಲಿ, ಲಿಂಗಾಯಿತ ಸಾದರ, ಲಿಂಗಾಯಿತ ಕಮ್ಮಾರ,ಲಿಂಗಾಯಿತ ಸಿಂಪಿಗ,ಲಿಂಗಾಯಿತ ಬಣಜಿಗ, ಲಿಂಗಾಯಿತ ಕುಂಚಿಟಿಗ, ಲಿಂಗಾಯಿತ ರೆಡ್ಡಿ, ಲಿಂಗಾಯಿತ ಹಡಪದ, ಲಿಂಗಾಯಿತ ಕುಡುಒಕ್ಕಲಿಗ, ಲಿಂಗಾಯಿತ ಚಮ್ಮಾರ, ಲಿಂಗಾಯಿತ ಕುರುಬ, ಲಿಂಗಾಯಿತ ಗಾಣಿಗ, ಲಿಂಗಾಯಿತ ಹೆಳವ, ಲಿಂಗಾಯಿತ ನೊಣಬ ಹೀಗೆ ನೂರಾರು ಜಾತಿಗಳ ಒಕ್ಕೂಟ. ಈಗ ಕೆಲವರು ಬರೀ ಗಾಣಿಗ(ಯಡಿಯುರಪ್ಪ-ಲಿಂಗಾಯಿತ ಗಾಣಿಗ), ಬರೀ ಕುಂಚಿಟಿಗ(ಹೊಸದುಗð ಶಾಂತವೀರ ಸ್ವಾಮಿ-ಲಿಂಗಾಯಿತ ಕುಂಚಿಟಿಗ), ಬರೀ ಸಾದರ(ಮುಖ್ಯಮಂತ್ರಿ ಚಂದ್ರು-ಲಿಂಗಾಯಿತ ಸಾದರ), ಬರೀ ಬಣಜಿಗ, ಹಿಂದು ಬೇಡಜಂಗಮ ಎಂದು, ಬರೀ ಕುಡು ಒಕ್ಕಲಿಗ ಎಂದು ಬರೆಸಲು ಆಯಾ ಮಠಗಳು,ಸಂಘ-ಸಂಸ್ಥೆಗಳು ಕರೆ ಕೊಟ್ಟಿವೆ.. ಇದು ಒಂದಾಗುವ ಮತ್ತು ವಿಘಟನೆಗೊಳ್ಳುವ ಕಾಲ. ಎಚ್ಚೆತ್ತುಕೊಳ್ಳುವುದು ಅವರವರಿಗೆ ಬಿಟ್ಟಿದ್ದು.

ಬಡ ಲಿಂಗಾಯಿತರ ಬೇಡಿಕ ಈಡೇರಿಸಲಿಲ್ಲ(ಕುಲಕಸುಬು ಪ್ರೋತ್ಸಾಹಿಸಲು ಅಭಿವೃದ್ಧಿ ನಿಗಮ ತೆರೆಯಲಿಲ್ಲ)

ಆಯಕಟ್ಟಿನ ಸ್ಥಳಗಳಿಂದ ದೂರ ಇಡುತ್ತಿರುವುದು.

ರಾಜಕೀಯವಾಗಿ ದುಬðಲಗೊಳಿಸಲು ಯತ್ನಿಸುತ್ತಿರುವುದು.

ಲಿಂಗಾಯಿತ ಅಧಿಕಾರಗಳಿಗೆ ಕಿರುಕುಳ(ಶಂಕರ್ ಬಿದರಿ ಪ್ರಕರಣ  ಇನ್ನೂ ಜನ ಮರೆತಿಲ್ಲ)









Tuesday, 12 May 2015

ಜಾತಿ , ಜಾತಿ ಗಣತಿ ಮತ್ತು ಮನಸ್ಥಿತಿ:-



ಈಗ ಎಲ್ಲಿ ನೋಡಿದರು ಜಾತಿಯದ್ದೆ ಮಾತು.ಶ್ರೀಮಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ಶುರು ಮಾಡಿಸಿದ್ದಾರೆ.

ನಾವು ಕನಾðಟಕದ ಪ್ರಬಲ ಜಾತಿ ಆಗಬೇಕೆಂದು ಎಲ್ಲಾ ಜಾತಿಗಳು ಪ್ರಯತ್ನಿಸುತ್ತಿವೆ. ವಿಶೇಷವಾಗಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಮೊದಲನೆ ಕೆಲಸ ಮಾಡಿದ್ದು ಸಾಲಮನ್ನಾ..  ಸಾಲಮನ್ನಾ ಸರಿಯೋ ತಪ್ಪೋ, ಆದರೆ ಸಾಲಮನ್ನಾ ಮಾಡುವುದರಲ್ಲು  ಜಾತಿ ಪ್ರೀತಿ ಮತ್ತು ಜಾತಿ ದ್ವೇಷ ಕಾಣಿಸಿತ್ತು. ಬೇಕೆಂದೆ ಬಡ ಲಿಂಗಾಯಿತ ಮತ್ತು ರೈತ ಸಮುದಾಯವಾದ ಬಡ ಒಕ್ಕಲಿಗರನ್ನು ಕಡೆಗಣಿಸಿ ಆ ಮೂಲಕ ಜಾತಿ ದ್ವೇಷ ಪ್ರದಶಿðಸಿದ್ದರು. ಸಾವಿರಾರು ಕೋಟಿ ಸಾಲಮನ್ನಾ ಮಾಡಿದ್ದರು ಕೆಲವೇ ಕೋಟಿ ಮನ್ನಾ ಮಾಡದೇ ತಮ್ಮ ಮಾಜಿ ಗುರುಗಳ ಮೇಲಿನ ದ್ವೇಷವನ್ನು ಹೀಗೆ ತೀರಿಸಿಕೊಂಡರು.


ಮಕ್ಕಳ ಪ್ರವಾಸದ ವಿಷಯದಲ್ಲೂ ಜಾತಿ ತೂರಿಸಿ ಜಾತ್ಯಾತೀತ ವ್ಯಕ್ತಿಯಾದರು.

ಸಕಾðರದ  ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಜಾತಿಯವರನ್ನು ಕೂರಿಸಿ ಅಹಿಂದ ಮುಖ್ಯಮಂತ್ರಿಯೆನಿಸಿಕೊಂಡರು.

ಬೇರೆಯವರನ್ನು ಜಾತಿವಾದಿ ಎಂದು ಕರೆದು ತಾವು ಹಾಗೆ ಮಾಡಿದ್ದು ಅವರಿಗೆ ತಪ್ಪು ಏನಿಸಲ್ಲ, ಬೇರೆಯವರ ಬೆನ್ನು ಮಾತ್ರ ಕಾಣುತ್ತೆ, ಅವರ ಬೆನ್ನು ಅವರಿಗೆ ಕಾಣಲ್ಲ. ಇದೇ ವಾಸ್ತವ

ಜಾತಿ ಗಣತಿ:-

ಸುಮಾರು 80 ವಷðಗಳ ನಂತರ ಕೈಗೊಳ್ಳಲಾಗಿರುವ ಈ ಜಾತಿ ಗಣತಿಯು ಕೆಲವರಿಗೆ ಸಂತೋಷ, ಕೆಲವರಿಗೆ ಕಹಿ...!

ಇನ್ನೂ ಕೆಲವರಿಗೆ ಸಿದ್ದರಾಮಯ್ಯ ಗೋಲ್ ಮಾಲ್ ಮಾಡಿ ತಮ್ಮ ಜಾತಿ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು ಎಂಬ ಗುಮಾನಿ.

ಈ ಮಧ್ಯೆ ಉಪಪಂಗಡಗಳನ್ನು ಎತ್ತಿ ಕಟ್ಟಿ ಹೊಡೆದು ಆಳುವ ಹುನ್ನಾರ ನಡೆಯುತ್ತಿರುವುದು ದುರಂತ, ಈ ವಿಚಾರದಲ್ಲಿ ಅತಿ ಹೆಚ್ಚು ಹೊಡೆತ ಬೀಳುವುದು ಲಿಂಗಾಯಿತರಿಗಂತೆ.

ಲಿಂಗಾಯಿತ ಅನ್ನುವುದು ಧಮð ಮಾಡಲು ಅಥವಾ ವೀರಶೈವ ಧಮð ಮಾಡುವ ಪ್ರಯತ್ನ ನಡೆದಿದೆ. ಆದರೆ ವಾಸ್ತವದಲ್ಲಿ 12 ನೇ ಶತಮಾನದಲ್ಲಿ ನಡೆದ ಕ್ರಾಂತಿಯಿಂದ ಎಲ್ಲಾ ಜಾತಿಗಳು ಲಿಂಗಾಯಿತ ಪಂಥದಲ್ಲಿ ಒಂದಾದವು. ಆದುದರಿಂದ ಲಿಂಗಾಯಿತರಲ್ಲಿ ಲಿಂಗಾಯಿತ ಪಂಚಮಸಾಲಿ, ಲಿಂಗಾಯಿತ ಸಾದರ, ಲಿಂಗಾಯಿತ ಕಮ್ಮಾರ,ಲಿಂಗಾಯಿತ ಸಿಂಪಿಗ,ಲಿಂಗಾಯಿತ ಬಣಜಿಗ, ಲಿಂಗಾಯಿತ ಕುಂಚಿಟಿಗ, ಲಿಂಗಾಯಿತ ರೆಡ್ಡಿ, ಲಿಂಗಾಯಿತ ಹಡಪದ, ಲಿಂಗಾಯಿತ ಕುಡುಒಕ್ಕಲಿಗ, ಲಿಂಗಾಯಿತ ಚಮ್ಮಾರ, ಲಿಂಗಾಯಿತ ಕುರುಬ, ಲಿಂಗಾಯಿತ ಗಾಣಿಗ, ಲಿಂಗಾಯಿತ ಹೆಳವ, ಲಿಂಗಾಯಿತ ನೊಣಬ ಹೀಗೆ ನೂರಾರು ಜಾತಿಗಳ ಒಕ್ಕೂಟ. ಈಗ ಕೆಲವರು ಬರೀ ಗಾಣಿಗ(ಯಡಿಯುರಪ್ಪ-ಲಿಂಗಾಯಿತ ಗಾಣಿಗ), ಬರೀ ಕುಂಚಿಟಿಗ(ಹೊಸದುಗð ಶಾಂತವೀರ ಸ್ವಾಮಿ-ಲಿಂಗಾಯಿತ ಕುಂಚಿಟಿಗ), ಬರೀ ಸಾದರ(ಮುಖ್ಯಮಂತ್ರಿ ಚಂದ್ರು-ಲಿಂಗಾಯಿತ ಸಾದರ), ಬರೀ ಬಣಜಿಗ, ಹಿಂದು ಬೇಡಜಂಗಮ ಎಂದು, ಬರೀ ಕುಡು ಒಕ್ಕಲಿಗ ಎಂದು ಬರೆಸಲು ಆಯಾ ಮಠಗಳು,ಸಂಘ-ಸಂಸ್ಥೆಗಳು ಕರೆ ಕೊಟ್ಟಿವೆ.. ಇದು ಒದಾಗುವ ಮತ್ತು ವಿಘಟನೆಗೊಳ್ಳುವ ಕಾಲ. ಎಚ್ಚೆತ್ತುಕೊಳ್ಳುವುದು ಅವರವರಿಗೆ ಬಿಟ್ಟಿದ್ದು.

ಒಕ್ಕಲಿಗರಲ್ಲು ಒಳಪಂಗಡಗಳಿವೆ ಆದರೆ ಬಹಿರಂಗವಾಗಿ ತೋರಿಸದೆ ರಾಜಕೀಯ ಲಾಭ ಪಡೆಯುವ ಕಲೆ ಅವರಿಗೆ ಸಿದ್ದಿಸಿದೆ. ಅವರಲ್ಲೂ ಮನಸ್ಥಾಪಗಳಿವೆ ಆದರೆ ಸಿದ್ದರಾಮಯ್ಯ ನಮ್ಮನ್ನು ತುಳಿಯುತ್ತಿದ್ದಾರೆ ಎಂಬ ಭಾವ ಅವರನ್ನು ಒಗ್ಗೂಡಿಸಿದೆ.

ಒಕ್ಕಲಿಗರು ಈ ದೇಶದ ಮೂಲ ರೈತ ಸಮುದಾಯದವರು, ಈ ದೇಶದಲ್ಲಿ 20 ಕೋಟಿಗೂ ಹೆಚ್ಚು ರೈತ ಸಮುದಾಯದವರಿದ್ದಾರೆ. ಉತ್ರಪ್ರದೇಶ, ಹರಿಯಾಣ, ಪಂಜಾಬ್ ನಲ್ಲಿ ಝಾಟ್ಸ್, ತಮಿಳುನಾಡಿನಲ್ಲಿ ಒಕ್ಕಲಿಗರ್, ಗೌಂಡರ್, ಕೇರಳದಲ್ಲಿ ನಾಯರ್, ಮಹಾರಾಷ್ಟ್ರದಲ್ಲಿ ಕೂಮಿðಗುಜರಾತ್ ನಲ್ಲಿ ಪಟೇಲ್ , ಹೀಗೆ ಸಾವಿರಾರು ರೈತ ಸಮುದಾಯಗಳಿವೆ ಅವುಗಳಲ್ಲಿ ಒಕ್ಕಲಿಗರು ಒಬ್ಬರು.
ಎಲ್ಲಾ ಜಾತಿಗು ಒಂದು ಕೋಡ್ ಕೊಟ್ಟಿದ್ದರೆ ಒಕ್ಕಲಿಗರಿಗೆ  ಒಕ್ಕಲಿಗ ಎಂದು , ವಕ್ಕಲಿಗ  ಎಂದು , ಗೌಡ  ಒಕ್ಕಲಿಗ ಎಂದು ಹೀಗೆ ಹತ್ತಾರು ಕೋಡ್ ಗಳನ್ನು ಕೊಟ್ಟಿರುವುದರ ಹಿಂದೆ ಸಮುದಾಯ ಹೊಡೆಯುವ ಹುನ್ನಾರ ಇರುವುದು ಸ್ಪಷ್ಟ...ಅಧಿಕಾರಕ್ಕಾಗಿ ಇಂತಹ ಕೀಳು ಮನಸ್ಥಿತಿ ಎಲ್ಲೂ ನೋಡಿಲ್ಲ.....ಇಂತಹ ವಿಕೃತ ಮನಸ್ಥಿತಿ ಕ್ಷಣಿಕ, ಸಮಾಜ ಶಾಶ್ವತ...ಹೊಡೆಯುವ ಮನಸ್ಥಿತಿಯವರು ಏನನ್ನೂ ಸಾಧಿಸಲ್ಲ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದರಿಂದ ಸಹಜವಾಗಿ ಕುರುಬರಲ್ಲಿ ಆತ್ಮವೀಶ್ವಾಸ ಬಂದಿದೆ. ನಾವು ಹೆಚ್ಚಬಹುದೆಂದು ಅವರ ನಂಬಿಕೆ. ಸಿದ್ದರಾಮಯ್ಯನ ಪ್ರತಿ ನಡೆಗು ಅವರ ಬೆಂಬಲ.ಕುರುಬರಲ್ಲೂ ಒಳಪಳಗಡಗಳಿವೆ ಕಾಡು ಕುರುಬ, ಜೇನು ಕುರುಬ(ಚಾಮರಾಜನಗರ-ಕೊಳ್ಳೆಗಾಲದ ಆದಿವಾಸಿಗಳು), ಗೌಡ ಕುರುಬ(ಸಿದ್ದರಾಮಯ್ಯ-ಗೌಡ ಕುರುಬ) ಮಾಸಲು ಕುರುಬ, ಗೊಂಡ, ರಾಜಗೊಂಡ, ಸಾವಂತ ಕುರುಬ, ಮಲೆಯ ಕುರುಬ, ಹೀಗೆ......ನೂರಾರು ಕುಲಗಳಿವೆ... ಇದುವರೆಗು ಕಾಡು ಕುರುಬ, ಜೇನು ಕುರುಬರು, ಮಾಸಲು ಕುರುಬರು ಎಂದು ಶಾಸಕರಾಗಿಲ್ಲ ಎಂಬುದು ಗಮನಾಹð...ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವುದರಿಂದ ಇವೆಲ್ಲ ಗೌಣ....

ವತೂðರ್ ಪ್ರಕಾಶ್ ಬೆದರಿಕೆ ಪ್ರಕರಣದಲ್ಲು ಅವರಿಗೆ ಬೆಂಬಲವಾಗಿ ಸಿದ್ದರಾಮಯ್ಯ ನಿಂತಿದ್ದಾರೆ ಎಂಬ ಗುಸುಗುಸು.

ದಲಿತರಲ್ಲು ನೂರಾಜು ಜಾತಿಗಳಿವೆ,ಎಡ-ಬಲ ಜಾತಿಗಳಿವೆ, ಈಗ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲು ಒಂದಾಗುತ್ತಿದ್ದಾರೆ, ಪರಮೇಶ್ವರ್ ಅವರಿಗು ಆಸೆಯಿದೆ(ಹೇಳಿಕೊಂಡಿದ್ದಾರೆ), ಎಡ-ಬಲ ಬಿಟ್ಟು ಒಂದಾದರೆ ದಲಿತರು ಮುಖ್ಯಮಂತ್ರಿ ಆಗಬಹುದು. ಒಳ ಮೀಸಲಾತಿ ಹೋರಾಟ ಜಾರಿಯಲ್ಲಿದೆ. ನಾಯಕ ಜನಾಂಗಕ್ಕೆ ವಾಲ್ಮೀಕಿ ಜನಾಂಗವೆಂದು ಕರೆಯುತ್ತಾರೆ, ಅವರನ್ನು ತುಳಿಯಲು ಪರಿಶಿಷ್ಟ ಪಂಗಡಕ್ಕೆ ಗೊಲ್ಲರನ್ನು ಸೇರಿಸಿದ್ದಾರಂತೆ. ಅಲ್ಲದೇ ನಾಯಕ ಜನಾಂಗಕ್ಕೆ ಕೊಟ್ಟಿದ್ದ ಕೋಡ್ ಕಾಡು ಕುರುಬರಿಗೆ ಕೊಟ್ಟಿದ್ದಾರಂತೆ...ಏನಿದರ ಮಮð
...?

ಮುಸ್ಲಿಂ ಬಾಂಧವರಿಗೆ ಬಿ.ಜೆ.ಪಿ ಅಧಿಕಾರದಲ್ಲಿ ಇಲ್ಲದೆ ಇರುವುದೇ ಸಂತಸ. ಅವರಲ್ಲೂ ನೂರಾರು ಜಾತಿಗಳನ್ನು ಮಾಡಿದ್ದರು ಅವರಿಗೆ ಭಯವಿಲ್ಲ ಏಕೆಂದರೆ ಧಮðದ ಕಾಲಂನಲ್ಲಿ ಎಲ್ಲರು ಮುಸ್ಲಿಂ ಎಂದು ಬರೆಸುತ್ತಾರೆ.

ಕ್ರಿಶ್ಚಿಯನ್ ವಿಷಯದಲ್ಲಿ ಸಕಾðರ ವಿಚಿತ್ರವಾಗಿ ನಡೆದುಕೊಳ್ಳುತ್ತಿದೆ. ಕ್ರಿಶ್ಚಿಯನ್ ಧಮðದಲ್ಲಿ ಬರೀ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಪಂಗಡಗಳಿದ್ದೊ, ಆದರೆ ಈಗ ನೂರಾರು ಜಾತಿಗಳನ್ನು ಸೃಷ್ಟಿಸಿದೆ..ಕ್ರಿಶ್ಚಿಯನ್  ಮಾದಿಗ, ಕ್ರಿಶ್ಚಿಯನ್ ಹೊಲೆಯ, ಕ್ರಿಶ್ಚಿಯನ್ ಭೋವಿ, ಕ್ರಿಶ್ಚಿಯನ್ ಈಡಿಗ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯಿತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್  ಕಮ್ಮಾರ, ಕ್ರಿಶ್ಚಿಯನ್ ಮಡಿವಾಳ, ಕ್ರಿಶ್ಚಿಯನ್  ವಿಶ್ವಕಮð......

ಅಬ್ಬಾ.. ಇಷ್ಟೊಂದು ಜಾತಿಗಳನ್ನು ಅಲ್ಲು ಸೃಷ್ಟಿಸಿ, ಅದು ಏನು ಮಾಡುತ್ತಾರೊ ಆ ದೇವರೆ ಬಲ್ಲ.


ಕ್ರಿಶ್ಚಿಯನ್ ಧಮðದಲ್ಲಿ ಇಷ್ಟೊದು ಜಾತಿ ಸೃಷ್ಟಿಸಿ ಅದು ಏಕೊ ಬೌದ್ಧ ಧಮð
ಕ್ಕೆ ಮತಾಂತರಗೊಂಡವರ ಜಾತಿ ಪತ್ತೆ ಮಾಡದೇ ಸುಮ್ಮನಾಗಿದ್ದು ಏಕೆ...ಏಕೆ ಪಕ್ಷಪಾತ..?   ಉತ್ತರ  ಇಲ್ಲ...

ಬಜೆಟ್ ವಿಷಯಕ್ಕೆ ಬಂದರೆ ಅಭಿವೃದ್ಧಿಗಿಂತ  ಹೆಚ್ಚು ಸಿ.ಎಂ  ತಮ್ಮ ಖುಚಿð ಉಳಿಸಿಕೊಳ್ಳಲು ಪಟ್ಟ ಪಾಡು ಎಂಬಂತೆ ಕಾಣಿಸಿತು. ಬಜೆಟ್  ಅಲ್ಲಿ ಕುರಿ ಸತ್ತರೆ   5 ಸಾವಿರ ,ಹಸು ಸತ್ತರೆ......?  ಏಕೆ ಈ ತಾರತಮ್ಯ...?

ಕೆಂಪೇಗೌಡ ಸಂಶೋಧನಾ ಸಂಸ್ಥಗೆ ಹಣ ಕೊಡಲಿಲ್ಲ..

ಬಿ.ಜಿ.ಎಸ್ ಸ್ಮಾರಕ ನಿಮಿðಸಲಿಲ್ಲ...

ಬಡ ಲಿಂಗಾಯಿತ/ಬಡ/ಮಧ್ಯಮ ಒಕ್ಕಲಿಗರ ಬೇಡಿಕ ಈಡೇರಿಸಲಿಲ್ಲ(ಒಕ್ಕಲಿಗರ ಕುಲಕಸುಬು ಪ್ರೋತ್ಸಾಹಿಸಲು ಒಕ್ಕಲಿಗ ಅಭಿವೃದ್ಧಿ ನಿಗಮ ತೆರೆಯಲಿಲ್ಲ)

ಒಳ ಮೀಸಲಾತಿ ಜಾರಿ ಬಗ್ಗೆ ಚಕಾರವೆತ್ತಿಲ್ಲ...

ಮಡಿವಾಳ, ಕ್ಷೌರಿಕ, ವಿಶ್ವಕಮð, ಕೊರಚ, ಕೊರಮ, ಹಂದಿಜೋಗಿ, ಗೊಲ್ಲ,ಕಾಡುಗೊಲ್ಲ, ಯಾದವ , ಕಾಡು ಕುರುಬ, ಜೇನು ಕುರುಬ,....  ಇತರೆ ಜಾತಿಗಳಿಂದ ಯಾವುದೇ ಶಾಸಕರನ್ನು ಗೆಲ್ಲಿಸದೆ ಇರುವುದು ಯಾವ ಅಹಿಂದ

ಬೆಂಗಳೂರು ವಿಭಜಿಸಿ ಕೆಂಪೇಗೌಡರ ಇತಿಹಾಸ ಅಳಿಸುವುದು ಅತಿ ಭಯಾನಕ ದ್ವೇಷ ರಾಜಕಾರಣ,

ಒಟ್ಟಿನಲ್ಲಿ ಯಾರ ಮಾತಿಗೂ ಬೆಲೆ ಕೊಡದೆ,ದಪðದಿಂದ , ಸವಾðಧಿಕಾರಿ ವತðನೆಯಿಂದ ಅಧಿಕಾರ ನಡೆಸುವವರು ಎಷ್ಟು ದಿನ ನಡೆಸಬಹುದು, ಒಂದಲ್ಲಾ ಒಂದು ದಿನ ಕೆಳಗಿಳಿಯಲೆ ಬೇಕು ಎಕೆಂದರೆ ಅದೇ ವಾಸ್ತವ......

"ಸುಹಾನ" ಸುಮಧುರ ಗಾನ

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬಂತೆ ಹಾಡು ಹಕ್ಕಿಗೆ ಬೇಕು ಜಾತಿ ಧರ್ಮ ಎಂದು ಕೆಲವು ಮೂಲಭೂತವಾದಿಗಳು ವಿರೋಧಿಸುತ್ತಿರುವುದು ಕಂಡಾಗ ಅಸಹ್ಯ  ಅನಿಸುತ್ತದೆ...